ಮಳೆ -
ವಾಯುಮಂಡಲದಲ್ಲಿರುವ ನೀರಾವರಿ ಸಂಘನಿಸಿ (ಕಂಡೆನ್ಸ್) ಭೂಮಿಗೆ ಕೆಡೆಯುವ ನೀರಹನಿ (ರೇನ್). ವಾಯುವಿನಲ್ಲಿ ಯಾವಾಗಲೂ ಸ್ವಲ್ಪ ನೀರಾವಿ ಇದ್ದೇ ಇರುತ್ತದೆ. ಇದರ ಮೊತ್ತ ಕಾಲದಿಂದ ಕಾಲಕ್ಕೆ ಮತ್ತು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುವುದು. ವಾಯುವಿನ ಈ ತೇವಧಾರಣ ಸಾಮಥ್ರ್ಯ ಉಷ್ಣತೆಯನ್ನು ಅವಲಂಬಿಸಿದೆ. ಅಂದರೆ ಉಷ್ಣತೆ ಏರಿದಂತೆ ಇದೂ ಏರುತ್ತದೆ. ನಿರ್ದಿಷ್ಟ ಉಷúತೆಯಲ್ಲಿರುವ ವಾಯು ತನ್ನ ತೇವಧಾರಣ ಸಾಮಥ್ರ್ಯದ ಮಿತಿ ಐದಿದಾಗ ಸಂತೃಪ್ತವಾಗಿದೆ (ಸ್ಯಾಚುರೇಟೆಡ್) ಎನ್ನುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ವಾಯು ಸಂತೃಪ್ತವಾಗಿರುವುದಿಲ್ಲ. ಪ್ರಾರಂಭದಲ್ಲಿ ಅಸಂತೃಪ್ತವಾಗಿರುವ ಒಂದಿಷ್ಟು ಮೊತ್ತದ ವಾಯು ತಣಿದಾಗ ಅದರ ಸಾಪೇಕ್ಷ ಅದ್ರ್ರತೆ (ರೆಲೆಟಿವ್ ಹ್ಯುಮಿಡಿಟಿ) ಜಾಸ್ತಿ ಆಗುತ್ತದೆ. ಶೀತಲನವನ್ನು (ತಣಿಸಿಕೆ) ಕ್ರಮಶಃ ಮುಂದುವರಿಸಿ ಸಾಪೇಕ್ಷದ್ರ್ರತೆಯನ್ನು ಶೇಕಡಾ 100ಕ್ಕೆ ಏರಿಸಬಹುದು. ಆಗ ವಾಯು ಸಂತೃಪ್ತವಾಗುತ್ತದೆ. ಇನ್ನೂ ಕೆಳಗಿನ ಉಷ್ಣತೆಯಲ್ಲಿ ಅದು ಸಂತೃಪ್ತವಾಗಿರಲು ಕಡಿಮೆ ತೇವ ಸಾಕು. ಹೀಗಾಗಿ ಈ ಮೊತ್ತಕ್ಕಿಂತ ಹೆಚ್ಚಿನದು ಮಿಗತೆ (ಸಪ್ರ್ಲಸ್) ಆಗುತ್ತದೆ. ಶೀತಲನಗೊಂಡ ವಾಯು ಇದನ್ನು ಧರಿಸಲಾರದು. ಆಗ ಈ ಮಿಗತೆ ನೀರಾವಿ ಅತ್ಯಂತ ಸೂಕ್ಷ್ಮ ನೀರ ಹನಿಗಳಾಗಿ ಸಂಘನಿಸುತ್ತದೆ. ಒಂದು ವೇಳೆ ವಾಯು ಏನಾದರೂ ಅತಿ ನಿರ್ಮಲವೂ ಪರಿಶುದ್ಧವೂ ಆಗಿದ್ದಿದ್ದರೆ ಶೀತಲನಗೊಂಡ ನೀರಾವಿ ಸುಲಭವಾಗಿ ಕಣ್ಣಿಗೆ ಕಾಣುವ ಮತ್ತು ಗಾತ್ರವಿರುವ ನೀರ ಹನಿಗಳಾಗಿ ಸಂಘನಿಸುತ್ತಿರಲಿಲ್ಲ. ವಸ್ತುತಃ ವಾಯು ಅಸಂಖ್ಯ ಧೂಳಕಗಳಿಂದಲೂ ಹೊಗೆ ಮತ್ತು ಕಡಲಿನಿಂದ ಎರಚಲ್ಪಟ್ಟ ಉಪ್ಪಿನ ಕಣಗಳಿಂದಲೂ ಕೂಡಿರುವುದು: 1 ಘನ ಸೆಂಮೀನಲ್ಲಿ ಸಾವಿರಾರು ಇಂಥ ಕಣಗಳು ಇರುವುದುಂಟು. ಇವು ತಮ್ಮ ಸುತ್ತಲೂ ನೀರಹನಿಗಳು ರೂಪುಗೊಳ್ಳುವ ಕ್ರಿಯೆಯನ್ನು ಪ್ರೇರಿಸುತ್ತವೆ. ಇವುಗಳಿಗೆ ಸಂಘನನ ಬೀಜಕೇಂದ್ರಗಳು (ಕಂಡೆನ್ಸೇಷನ್ ನ್ಯೂಕ್ಲಿಯೈ) ಎಂದು ಹೆಸರು. ಸೂಕ್ಷ್ಮಗಾತ್ರದ ಈ ನೀರಹನಿಗಳು ವಾಯುವಿನ ಉನ್ನತಸ್ತರಗಳಲ್ಲಿ ಮೋಡವಾಗಿ ತೇಲುತ್ತಿರುತ್ತವೆ. ಮೋಡದಲ್ಲಿಯ ನೀರಹನಿಗಳು ಸಾಧಾರಣವಾಗಿ ಅತ್ಯಂತ ಕಿರಿಯಗಾತ್ರದವು. ಹೀಗಾಗಿ ಅವು ಮೋಡದ ತಳದಲ್ಲಿಯ ಊಧ್ರ್ವವಾಯುಪ್ರವಾಹಗಳಿಂದ ಮೇಲಕ್ಕೆ ಒಯ್ಯಲ್ಪಟ್ಟು ಅಂತರೀಕ್ಷದಲ್ಲಿ ನೇಲುತ್ತಿರುತ್ತವೆ. ಮೋಡಗಳ ರೂಪಣೆಗೂ ಅಸ್ತಿತ್ವಕ್ಕೂ ಇವು ಅಗತ್ಯ.  ನೀರಹನಿಗಳು ಇವನ್ನು ಎದುರಿಸಿ ಗುರುತ್ವದ ಸೆಳೆತದಿಂದ ಕೆಳಬೀಳಬೇಕಾದರೆ ಒಂದೊಂದು ಹನಿಯ ವ್ಯಾಸವೂ 1 ಮಿಮೀ ಅಥವಾ ಹೆಚ್ಚು ಪ್ರಮಾಣದಲ್ಲಿರಬೇಕು.

ಮೋಡದಲ್ಲಿಯ ನೀರು ಹನಿಗಳು ಎರಡು ಮುಖ್ಯಪ್ರಕ್ರಿಯೆಗಳ ಮೂಲಕ ಮಳೆಹನಿಯ ಗಾತ್ರ ತಳೆಯುತ್ತವೆ.

ಮೊದಲನೆಯದು ನೀರು-ಬರ್ಫ ವರ್ಗಾವಣೆ ಪ್ರಕ್ರಿಯೆ. ಬರ್ಫ ಬಿಂದುವಿಗಿಂತ (ಫ್ರೀಝಿಂಗ್ ಪಾಯಿಂಟ್) ಕೆಳಗಿನ ಉಷ್ಣತೆಯಲ್ಲಿರುವ ವಾಯುವಿನಲ್ಲಿ ಮೋಡ ರೂಪುಗೊಂಡುದಾದರೆ ಹೆಚ್ಚಿನ ಹನಿಗಳೂ ಘನೀಭವಿಸದೆ ದ್ರವವಾಗಿಯೇ ಉಳಿದಿರುತ್ತವೆ. ಇದಕ್ಕೆ ಅತಿಶೀತಲಿತಸ್ಥಿತಿ (ಸೂಪರ್‍ಕೂಲ್ಡ್ ಸ್ಟೇಟ್) ಎಂದು ಹೆಸರು. -40ಲಿಯಷ್ಟು ನಿಮ್ನ ಉಷ್ಣತೆಯಲ್ಲಿ ಕೂಡ ಇದು ಸಂಭವಿಸಬಹುದು. ಅಲ್ಲಿ ಎಲ್ಲ ಹನಿಗಳೂ ಘನೀಭವಿಸುತ್ತವೆ. ಹೀಗೆ ಬರ್ಫಬಿಂದುವಿಗಿಂತ ಕೆಳ ಉಷ್ಣತೆಗಳಲ್ಲಿರುವ ಮೋಡ ಬರ್ಫಕಣಗಳ ಹಾಗೂ ನೀರಹನಿಗಳ ಮಿಶ್ರಣವಾಗಿರುತ್ತದೆ. (ಪರ್ಭ ಬಿಂದುವಿಗಿಂತ ಕೆಳಗಿನ ಉಷ್ಣತೆಗಳಲ್ಲಿ ಕೇವಲ ಕೆಲವೇ ಹನಿಗಳು ಘನೀಭವಿಸುತ್ತವೆ). ಆದರೆ ನೀರಿನ ಜೊತೆ ಮತ್ತು ಬರ್ಫದ ಜೊತೆ ಏಕಕಾಲದಲ್ಲಿ ಸಂಸ್ಪರ್ಶದಲ್ಲಿರುವ ವಾಯುವಿನ ಸಾಪೇಕ್ಷಅದ್ರ್ರತೆಗಳು ವಿಭಿನ್ನವಾಗಿರುತ್ತವೆ. ನೀರಿಗೆ ಅದು ಸಚಿತೃಪ್ತಬಿಂದುವಿಗಿಂತ ಸ್ವಲ್ಪ ಕೆಳಗಿರಬಹುದು. ಬರ್ಫಕ್ಕೆ ಕೊಂಚ ಮೇಲಿರಬಹುದು. ನೀರಹನಿಗಳು ಆವಿಯಾಗಿ ಹೋಗುತ್ತವೆ; ಆದರೆ ತೇವ ಮಾತ್ರ ಬರ್ಫ ಕಣಗಳ ಮೇಲೆ ಸಂಘನಿಸುತ್ತದೆ. ಹೀಗೆ ನೀರಹನಿಗಳ ಲೆಕ್ಕದಲ್ಲಿ ಬರ್ಫಕಣಗಳು ಬೆಳೆಯತೊಡಗಿ ಕೆಳಬೀಳುತ್ತ ಬೆಚ್ಚಗಿನ ವಾಯುಸ್ತರ ಪ್ರವೇಶಿಸಿದಾಗ ಮಳೆಹನಿಗಳಾಗಿ ಕರಗುತ್ತವೆ.

ಮಳೆ ರೂಪಣೆಗೊಳ್ಳುವ ಎರಡನೆಯ ಪ್ರಕ್ರಿಯೆಗೆ ಸಂಲಯನ (ಕೊಎಲೆಸೆನ್ಸ್) ಎಂದು ಹೆಸರು. ಇಲ್ಲಿ ನಿಧಾನವಾಗಿ ಕೆಳಬೀಳುತ್ತಿರುವ ಚಿಕ್ಕಹನಿಗಳಿಗೆ ದೊಡ್ಡ ಹನಿಗಳೂ ಡಿಕ್ಕಿ ಹೊಡೆದು ಅವುಗಳ ಜೊತೆ ಬೆಸೆದುಕೊಂಡು ಇನ್ನೂ ದೊಡ್ಡ ಹನಿಗಳಾಗುತ್ತವೆ. ಉಷ್ಣವಲಯಗಳಲ್ಲಿ ಬರ್ಫಮಟ್ಟಕ್ಕಿಂತ ಹೆಚ್ಚೇನೂ ಎತ್ತರಕ್ಕೆ ವ್ಯಾಪಿಸಿರದ-ಕೆಲವು ವೇಳೆ ಬರ್ಫಮಟ್ಟವನ್ನೂ ತಲುಪಿರದ-ಮೋಡಗಳಿಂದ ಮಳೆ ಸುರಿಯುತ್ತದೆ. ಊಧ್ರ್ವಒತ್ತಡ ಕಡಿಮೆ ಇರುವ ಮೋಡಗಳು ಒಳನಾಡುಗಳಿಗಿಂತಲೂ ಕರಾವಳಿಸ್ಥಳಗಳಲ್ಲಿ ಚೆನ್ನಾಗಿ ಮಳೆ ಸುರಿಸಬಲ್ಲವು ಎಂಬುದು ತಿಳಿದಿದೆ. ಕಣಗಳ ರೂಪದಲ್ಲಿ ಸಾಗರಗಳಿಂದ ಮೇಲಕ್ಕೆ ತುಂತರಿಸಲ್ಪಡುವ ದೈತ್ಯಬೀಜಕೇಂದ್ರಗಳು (ಜಯಂಟ್ ನ್ಯೂಕ್ಲಿಯೈ) ಊಧ್ರ್ವಪ್ರವಾಹಗಳಿಂಧ ಮೋಡಗಳವರೆಗೂ ಒಯ್ಯಲ್ಪಟ್ಟು ಅಲ್ಲಿ ಸಂಲಯನ ಶೃಂಖಲಾ ಕ್ರಿಯೆಯನ್ನು ಪ್ರವರ್ತಿಸುತ್ತವೆ ಎಂಬ ವಾದವನ್ನು ಈ ಸಂಗತಿ ಪುಷ್ಟೀಕರಿಸುತ್ತದೆ.

ಮಳೆ ಉಂಟಾಗಬೇಕಾದರೆ ನಾಲ್ಕು ಕ್ರಿಯಾತಂತ್ರಗಳು ಏಕಕಾಲೀಕವಾಗಿ ಸಂಭವಿಸುವುದು ಅವಶ್ಯ: ವಾಯುಶೀತಲನ, ಸಂಘಟನ, ಮೇಘ ಸಮುಚ್ಚಯಗಳ ಬೆಳೆವಣಿಗೆ ಮತ್ತು ಮಳೆಗೆ ಕಾರಣವಾಗಲು ಸಾಕಾಗುವಷ್ಟು ದರದಲ್ಲಿ ತೇವದ ಸಂಚಯನ.

ವಾಯುರಾಶಿಯ ಊಧ್ರ್ವಗಮನ ಹಲವು ರೀತಿಗಳಲ್ಲಿ ಉಂಟಾಗುತ್ತದೆ.

ಮೊದಲನೆಯದಾಗಿ, ಹಗಲ ಹೊತ್ತು ನೆಲಭಾಗದ ಮೇಲ್ಮೈ ಪ್ರಬಲಆತಪನದ (ಇನ್ಸೊಲೇಶನ್-ಭೂತಲ ತಲಪುವ ಸೌರವಿಕರಣ) ಕಾರಣವಾಗಿ ಬಿಸಿ ಆಗುತ್ತದೆ. ಬೇಸಗೆಯಲ್ಲಿಯಂತೆ. ಬಿಸಿ ಮೇಲ್ಮೈ ಜೊತೆ ಸಂಸ್ಪರ್ಶದಲ್ಲಿರುವ ವಾಯು ಕೂಡ ಬಿಸಿಕೊಂಡು ವ್ಯಾಕೋಚಿಸಿ ಮೇಲೇರುತ್ತದೆ. ಬೇಸಗೆಯ ಅಪರಾಹ್ಣಗಳಲ್ಲಿ ಮೋಡಗಳು ಸಂಚಯನಗೊಳ್ಳುವುದೂ ಮೇಲೇರುವ ವಾಯು ಸಾಕಷ್ಟು ಅದ್ರ್ರವಾಗಿರುವ ಸ್ಥಳಗಳಲ್ಲಿ ಸಂಜೆವೇಳೆ ಗುಡುಗು ಸಹಿತವಾದ ಬೇಸಗೆಮಳೆ ಸುರಿಯುವುದೂ ಇದಕ್ಕೆ ನಿದರ್ಶನ.

ಎರಡನೆಯದಾಗಿ ಮಾರುತಪ್ರವಾಹದ ಎದುರಿಗೆ ಪರ್ವತಸ್ತೋಮ ಅಡ್ಡಬಂದಾಗ ವಾಯುರಾಶಿ ಮೇಲೇರುವುದು ಅನಿವಾರ್ಯವಾಗುತ್ತದೆ. ಬೆಟ್ಟ ಗುಡ್ಡಗಳ ಇಳಿಜಾರುಗಳ ಮೂಲಕ ಗಾಳಿ ಮೇಲಕ್ಕೆ ಹರಿಯುವಾಗ ಸಾಕಷ್ಟು ತಣ್ಣಗಾಗಿ ಮೋಡಗಳು ಮೈದಳೆಯುತ್ತವೆ. ಇದರಲ್ಲಿಯ ತೇವದ ಪ್ರಮಾಣ ತಣ್ಣಗಾಗಿ ಮೋಡಗಳು ಮೈದಳೆಯುತ್ತವೆ. ಇದರಲ್ಲಿಯ ತೇವದ ಪ್ರಮಾಣ ಸಾಕಷ್ಟಿದ್ದು ಊಧ್ರ್ವಗಾಮಿ ಚಲನೆ ಮುಂದುವರಿದರೆ ಮಳೆ ಬೀಳುವುದು ಖಂಡಿತ. ಹಿಮಾಲಯ ಪರ್ವತಸಾಲುಗಳಲ್ಲಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಪರ್ವತಜನ್ಯ ಮಳೆಯಬಿರುಸು ಹೊಡೆತವೂ ಗಿರಿಶಿಖರಗಳನ್ನು ವಾಯುದಾಟಿ ಮುಂದಕ್ಕೆ ಹೋದಂತೆ ಮಳೆ ಗಮನಾರ್ಹವಾಗಿ ಕಡಿಮೆಯಾಗುವುದೂ ಇದಕ್ಕೆ ನಿದರ್ಶನಗಳು. ಮುಂದೆ ವಾಯು ಕೆಳಗಿಳಿಯುವುದು. ಪ್ರಪಂಚದ ಅತಿಮಳೆ ಬೀಳುವ ಕೆಲವು ಪ್ರದೇಶಗಳು ಬೆಟ್ಟದ ಇಳಿಜಾರುಗಳ ಪಕ್ಕದಲ್ಲಿವೆ.

ಮೂರನೆಯದಾಗಿ, ಗತ್ಯಾತ್ಮಕ ಕಾರಣಗಳಿಂದಾಗಿ ವಾಯು ರಾಶಿ ಬೃಹತ್ಪ್ರಮಾಣದಲ್ಲಿ ಮೇಲೇರಬಹುದು. ಉದಾಹರಣೆಗೆ ಚಕ್ರವಾತವೊಂದರ (ಸುಂಟರಗಾಳಿ) ಕ್ಷೇತ್ರದ ಒಳಗೆ ಅಥವಾ ಅದರ ಕೇಂದ್ರದ ಹತ್ತಿರ ಇದು ಸಂಭವಿಸುತ್ತದೆ. ಚಕ್ರವಾತದಲ್ಲಿ ವಾಯು ಎಲ್ಲೆಡೆಗಳಿಂದಲೂ ನಿಮ್ನ ಸಂಮರ್ದದಲ್ಲಿರುವ ಅದರ ಕೇಂದ್ರಾಭಿಮುಖವಾಗಿ ಪ್ರವಹಿಸುತ್ತದೆ ಎಂಬುದು ಗೊತ್ತಿದೆ. ಹೀಗೆ ಸುಂಟರಗಾಳಿಯ ಪ್ರದೇಶದಲ್ಲಿ ಸಂಗ್ರಹಗೊಂಡು ಕ್ಷಿತಿಜೀಯವಾಗಿ ತಪ್ಪಿಸಿಕೊಂಡು ಹೋಗದಂತೆ ಪ್ರತಿಬಂಧಿಸಲ್ಪಟ್ಟ ವಾಯು ಅತಿರಭಸವಾದ ಊಧ್ರ್ವಚಲನೆಗೆ ಈಡಾಗುತ್ತದೆ. ಈ ವಾಯುವಿನಲ್ಲಿ ಸಾಧಾರಣವಾಗಿ ಸಾಕಷ್ಟು ತೇವವಿರುವುದರಿಂದ ಚಕ್ರವಾತದ ಒಳಪ್ರದೇಶದಲ್ಲಿ ಮಳೆ ಬಿರುಸಾಗಿ ಸುರಿಯುತ್ತದೆ. ಹೀಗಾಗಿ ಚಕ್ರವಾತದ ಅವಸಂಮರ್ದಗಳ ಹಾದಿಯ ನೇರ ಮತ್ತು ಸಮೀಪ ಇರುವ ಪ್ರದೇಶಗಳಲ್ಲಿ ಮಳೆ ತೀವ್ರವಾಗಿರುತ್ತದೆ. 

	ಸಿಡಿಲು ಮಳೆ: ಮಿಂಚು ಮತ್ತು ಗುಡುಗುಸಹಿತವಾದ ಮಳೆಗೆ ಸಿಡಿಲುಮಳೆ ಎಂದು ಹೆಸರು. ಇದು ಸಂಭüವಿಸಬೇಕಾದರೆ ವಾಯುಮಂಡಲದಲ್ಲಿ ತೀವ್ರ ಅಸ್ಥಿರತೆಯಿದ್ದು ತೇವಪೂರಿತ ವಾಯುವಿನ ಹಿರಿರಾಶಿ ಅಗಾಧ ಎತ್ತರಗಳಿಗೆ ನಯನಪ್ರವಾಹಗಳಿಂದ (ಕನ್ವೆಕ್ಷನ್ ಕರೆಂಟ್) ತೂರಲ್ಪಡಬೇಕು. ಎದ್ದು ಕಾಣುವ ಸ್ಥೂಣಾಕಾರದ (ಕಮ್ಮಾರನ ಬಡಿಗಲ್ಲು) ಕ್ಯುಮ್ಯುಲೊನಿಂಬಸ್ ಮೋಡದಲ್ಲಿ ಇದನ್ನು ಗುರುತಿಸಬಹುದು. ಇದರ ತಳ ದಟ್ಟ ಕಪ್ಪಗಿದ್ದು ಕ್ಷೋಭೆಯಿಂದ ಕೂಡಿರುತ್ತದೆ. ಈ ಮೋಡ 9ರಿಂದ 15ಕಿಮೀ ಎತ್ತರದವರೆಗೂ ವ್ಯಾಪಿಸಿರುತ್ತದೆ. ಇದರಲ್ಲಿಯ ವಿದ್ಯುದಾವೇಶಗಳ ಕಾರಣವಾಗಿ ಮಿಂಚುಗುಡುಗು ಉದ್ಭವಿಸುತ್ತವೆ. ಮೋಡದೊಳಗಿನ ಕ್ಷೋಭೆಯ ಸ್ಥಿತಿಯಲ್ಲಿ ಮಳೆಹನಿಗಳು ಬಿರಿದು ಚಿಕ್ಕ ಗಾತ್ರದವು ಮೋಡದ ಕೊಡಿಗೆ ಒಯ್ಯಲ್ಪಡುತ್ತವೆ. ದೊಡ್ಡಗಾತ್ರ ಕೆಳಮಟ್ಟದಲ್ಲಿ ಉಳಿದಿರಬಹುದು ಅಥವಾ ಪುಟ್ಟ ಬರ್ಫ ಕಣಗಳನ್ನು ಎರಚುತ್ತ ಘನೀಭವಿಸಬಹುದು. ಈ ಕಣಗಳು ಮತ್ತೆ ಮೊಡದ ಕೊಡಿಗೆ ಒಯ್ಯಲ್ಪಡುತ್ತವೆ. ಈ ಪ್ರಕ್ರಿಯೆಗಳ ಕಾರಣವಾಗಿ ವಿದ್ಯುದಾವೇಶಗಳು ಪ್ರತ್ಯೇಕಿಸಲ್ಪಡುತ್ತವೆ. ಇವುಗಳಿಗೆ ಮಾಯು ಒದಗಿಸುವ ರೋಧನ (ಇನ್ಸುಲೇಶನ್) ಬಿರಿದು ಹೋದಾಗ  ಮಿಂಚಿನ ಛಳುಕು ಕಾಣಿಸಿಕೊಳ್ಳುತ್ತದೆ-ಕೆಲವು ವೇಳೆ ಪೂರ್ತಿ ಮೋಡದ ಒಳಗೆ, ಇತರ ವೇಳೆ ಮೋಡದಿಂದ ಭೂಮಿಯವರಿಗೆ ಮಿಂಚು ಸಾಧಾರಣವಾಗಿ ಕವಲು ಕವಲಾಗಿರುವ ತೆಳು ರೇಖೆಗಳ ನೇರ ಹಬ್ಬುತ್ತದೆ. ಎಂದೇ ಕವಲು ಅಥವಾ ಸೀಳು ಮಿಂಚು ಎಂಬ ಹೆಸರು. ದೂರ ಪ್ರದೇಶಗಳಲ್ಲಿ ಇದು ಮೋಡದಿಂದ ಮರೆಮಾಚಲ್ಪಟ್ಟು ವಿಸರಿತ ಪ್ರಕಾಶವಾಗಿ ಪ್ರಕಟವಾಗುತ್ತದೆ. ಇದಕ್ಕೆ. ಮಸುಕು ಮೀಂಚು ಎಂದು ಹೆಸರು. ಮಿಂಚು ವಾಯುವಿನ ಮೂಲಕ ಹರಿಯುವಾಗ ತಾತ್ಕ್ಷಣಿವಾಗಿ ಅಗಾಧ ಮೊತ್ತದ ಶಾಖವನ್ನು ಉತ್ಪಾದಿಸುತ್ತದೆ. ತತ್ಪರಿಣಾಮವಾಗಿ ವಾಯುವಿನಲ್ಲಿ ಹಠಾತ್ತನೆ ವ್ಯಾಕೋಚನೆ ಹಾಗೂ ಸಂಕೋಚನೆ ಸಂಭವಿಸಿ ಶಬ್ಧ ತರಂಗಗಳು ಉತ್ಪಾದನೆಗೊಳ್ಳುತ್ತವೆ. ಆಗ ಗುಡುಗುತ್ತದೆ. ಭೂಮಾನಕಗಳ ಪ್ರಕಾರ ಮಿಂಚು ತತ್‍ಕ್ಷಣವೇ ಗೋಚರವಾದರೆ, ಗುಡುಗಿನ ಸದ್ದು 1.ಸೆಕೆಂಡಿಗೆ 320 ಮೀ ಚಲಿಸುತ್ತದೆ. ಈ ಅಳತೆಯನ್ನು ಉಪಯೋಗಿಸಿ ಮಿಂಚಿನ ದೂರವನ್ನು ಗಣಿಸುವುದು ಸಾಧ್ಯ. 

	ಕ್ಯುಮ್ಯುಲೊನಿಂಬಸ್ ಅಥವಾ ಸಿಡಿಲು ಮೋಡ ಹಲವಾರು ಕೋಶಗಳಿಂದಾಗಿದೆ. ಪ್ರತಿಯೊಂದು ಕೋಶವೂ ನಯನ ಪರಿಚಲನೆಯ (ಕನ್ವೆಕ್ವಿವ್ ಸಕ್ರ್ಯುಲೇಶನ್) ಒಂದು ಘಟಕವಾಗಿ ವರ್ತಿಸುತ್ತ ಆಸನ್ನ ಕೋಶಗಳಿಂದ ಸ್ವತಂತ್ರವಾಗಿ ತನ್ನ ಹ್ರಸ್ವಾವಧಿ ಜೀವನ ಚಕ್ರವನ್ನು ಪೂರೈಸುತ್ತದೆ. ಬಿಡಿಕೋಶಗಳ ವ್ಯಾಸ 2ರಿಂದ 10 ಕಿಮೀ ವರೆಗೆ ಇರಬಹುದು. ಅಕ್ಕಪಕ್ಕದ ಕೋಶಗಳ ನಡುವೆ 1.ರಿಂದ 2ಕೀಮೀ ಅಗಲದ ಮೇಘಭರಿತ ಗಲ್ಲಿಗಳಿವೆ. ಒಂದು ಕೋಶದ ಜೀವನಚಕ್ರದಲ್ಲಿ ಮೂರು ನಿರ್ದಿಷ್ಟ ಘಟ್ಟಗಳನ್ನು ಗುರುತಿಸಲಾಗಿದೆ. 

	(ಅ) ಕ್ಯುಮ್ಯುಲಸ್ ಘಟ್ಟ : ಇದು ಒಂದು ಅಥವಾ ಹೆಚ್ಚು ಕ್ಯುಮುಸ್ ಮೋಡಗಳು 8.ಕಿಮೀ ಅಗಲ ತಳವಿರುವ ದೊಡ್ಡ ಕ್ಯುಮ್ಯುಲಸ್ ಆಗಿ ಬೆಳೆಯುವ ಘಟ್ಟ. ಈ ಘಟ್ಟದಲ್ಲಿ ಸಾಮಾನ್ಯವಾಗಿಕೋಶಪೂರ್ತಿ ಊಧ್ರ್ವವಾಯುಪ್ರವಾಹ ವಿರುತ್ತದೆ: ಇದರ ವೇಗ ಸೆಕೆಂಡಿಗೆ 30 ಮೀ ವರೆಗೂ ಇರುವುದುಂಟು. ಅದೇ ವೇಳೆ ಎಲ್ಲ ಮಟ್ಟಗಳಲ್ಲಿ ಬದಿಗಳ ಮೂಲಕವೂ ಅಂತೆಯೇ ಮೋಡದ ಬುಡದಿಂದಲೂ ಕೋಶಕ್ಕೆ ಒಳಹರಿವು ಇದ್ದೇ ಇರುವುದು. 

	(ಆ) ಪ್ರಬುದ್ಧ ಘಟ್ಟ : ಅವಕ್ಷೇಪಣದ ಇಳಿಕೆಯೊಂದಿಗೆ (ಫಾಲ್ ಆಫ್ ಪ್ರೆಸಿಪಿಟೇಷನ್) ಈ ಘಟ್ಟ ಆರಂಭವಾಗುತ್ತದೆ. ಈ ಹಿಂದೆ ಊಧ್ರ್ವ ವಾಯು ಪ್ರವಾಹವಿದ್ದ ಮೋಡದಲ್ಲಿ ಅವಕ್ಷೇಪದ ಬಿಡುಗಡೆ ಅಧೋವಾಯು ಪ್ರವಾಹವನ್ನು ಪ್ರಾರಂಭಿಸುತ್ತದೆ. ಅಧೋಗಾಮಿ ವಾಯು ಕೆಳಬೀಳುತ್ತಿರುವ ಹನಿಗಳ ಬಾಷ್ಟೀಭವನದ ಕಾರಣವಾಗಿ ಸಂತೃಪ್ತವಾಗಿರುತ್ತದೆ.  ಪರಿಣಾಮವಾಗಿ ಇದು ಇಳಿಕೆಯ ವೇಳೆ ಬಿಸಿಯಾಗುತ್ತದೆ. ಈ ವಾಯು ಪ್ರತಿಯೊಂದು ಘಟ್ಟದಲ್ಲಿಯೂ ಅದರ ಪರಿಸರಕ್ಕಿಂತ ತಣ್ಣಗಿರುವುದರಿಂದ ತನ್ನ ಕೆಳಮುಖ ಪ್ರಯಾಣವನ್ನು ತಾನಾಗಿಯೇ  ಮುಂದುವರಿಸುತ್ತಿರುವುದು. ಸೆಕೆಂಡಿಗೆ 12 ಮೀ ವರೆಗಿನ ವೇಗವಿರುವ ಅಧೋವಾಯುಪ್ರಹಾಗಳನ್ನು ಗುರುತಿಸಲಾಗಿದೆ. ಮಳೆ ಬೀಳಲು ತೊಡಗಿದ ಸ್ವಲ್ಪ ವೇಳೆಯಲ್ಲಿ ಈ ಗರಿಷ್ಠವೇಗ ಒದಗುವುದು. ಊಧ್ರ್ವ ಹಾಗೂ ಅಭೋವಾಯುಪ್ರಾವಾಹಗಳೆರಡೂ ಕೋಶದೊಳಗೆ ಸಹಜೀವನ ನಡೆಸುತ್ತಿರುವುವು. 

	(ಇ) ಕ್ಷಯ ಘಟ್ಟ (ಡಿಸ್ಸಿಪ್ಭೆಟಿಂಗ್ ಸ್ಟೇಜ್) : ಈ ಘಟ್ಟ ತಲಪುವುದು ಅಧೋಪ್ರವಾಹ ಮೋಡದ ಕೆಳಭಾಗದ ಅಡ್ಡ ಹಬ್ಬಿ ಊಧ್ರ್ವಪ್ರವಾಹ ದ್ವಿತೀಯಕ ಪ್ರಾಮುಖ್ಯದ್ದಾಗುವಾಗ. ಅಂತಿಮವಾಗಿ ಮೋಡದ ಪೂರ್ಣ ಕೆಳಭಾಗವೂ ಅಧೋಪ್ರವಾಹವನ್ನು ಪ್ರದರ್ಶಿಸುತ್ತದೆ. ಅದೇ ವೇಳೆ ಮೋಡದ ಮೇಲುಭಾಗದಲ್ಲಿ ಸ್ವಲ್ಪ ಮಾತ್ರ ಊಧ್ರ್ವಚಲನೆ ಶಕ್ತಿಶಾಲಿಯಾಗಿಲ್ಲದಿರುವುದರ ಪರಿಣಾಮವಾಗಿ ಮೇಲುಭಾಗ ಬದಿಗಳಲ್ಲಿ ಅಂದರೆ ಅಡ್ಡಡ್ಡವಾಗಿ ಹಬ್ಬ ತೊಡಗುತ್ತದೆ. ಮೋಡದ ಈ ಭಾಗದಲ್ಲಿ ಬರ್ಫದ ಹರಳುಗಳಿರುವುದರಿಂದ ಹರಿಡಿಹೋದ ಭಾಗ ಸಿರ್ರಸ್ ಮೋಡದ ಆಕಾರ ತಳದಿರುತ್ತದೆ. ಎಂದೇ ಅದನ್ನು ಮಿಥ್ಯಾ ಸಿರ್ರಸ್ ಅಥವಾ ಸ್ಥೂಣ ಸಿರ್ರಸ್ ಎಂದು ಕರದಿದೆ. ಮೋಡದ ಕೆಳಭಾಗ ಬಲುಕಾಲ ಹಾಗೆಯೇ ಇರಲಾರದು. ಸ್ಥೂಣ ಸಿರ್ರಸನ್ನೂ ಉನ್ನತ ಸ್ತರಗಳಲ್ಲಿಯ ಇತರ ಸ್ತರೀಕೃತ ಶೇಷಗಳನ್ನೂ ಕಳೆದುಕೊಳ್ಳುವ ಕ್ಷಯದ ಮೊದಲ ಘಟ್ಟ ಇದಾಗಿರಬಹುದು.

	ಮೇಲೆ ವಿವರಿಸಿದ ಕೋಶೀಯ ರಚನೆ ಮತ್ತು ಜೀವನಚಕ್ರ ವಿಕಾಸದ ಮೂರು ಘಟ್ಟಗಳನ್ನು ತಿಳಿಸುತ್ತವೆ. ಬಿಡಿಕೋಶವೊಂದರೆ ಜೀವನಚಕ್ರ ಸುಮಾರು ಒಂದು ಗಂಟೆ ಕಾಲ ಇರುತ್ತದೆ. ತೀವ್ರ ಬಿರುಗಾಳಿ ಸಂದರ್ಭದಲ್ಲಿ ಪ್ರಬುದ್ಧ ಘಟ್ಟ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಇರಬಹುದು., ಪ್ರಬುದ್ಧ ಘಟ್ಟದಲ್ಲಿ ಕೋಶ ಸತತವಾಗಿ ಪುನಶ್ಚೈತನ್ಯಗೊಳ್ಳುತ್ತ ಅತಿಕೋಶವಾಗಿ ಉಬ್ಬುತ್ತದೆ. ಇದರಲ್ಲಿ ಊಧ್ರ್ವ ಹಾಗೂ ಅಧೋಪ್ರವಾಹಗಳೆರಡೂ ಹೆಚ್ಚು ಕಡಿಮೆ ಒಂದೇ ಸ್ಥಿತಿಯಲ್ಲಿ ಸಹಜೀವನ ನಡೆಸುತ್ತ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಇರುವುದು ಸಾಧ್ಯ. ಇಂಥ ಬಿರುಗಾಳಿಯಲ್ಲಿ ಪ್ರಬಲವಾದ ಊಧ್ರ್ವ ಹಾಗೂ ಅಧೋಪ್ರವಾಹಗಳೆರಡೂ ಹೆಚ್ಚು ಕಡಿಮೆ ಒಂದೇ ಸ್ಥಿತಿಯಲ್ಲಿ ಸಹಜೀವನ ನಡೆಸುತ್ತ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಇರುವುದು ಸಾಧ್ಯ. ಇಂಥ ಬಿರುಗಾಳಿಯಲ್ಲಿ ಪ್ರಬಲವಾದ ಊಧ್ರ್ವ ಮಾರುತ ಅಪರೂಪಣ (ವರ್ಟಿಕಲ್ ಎಂಡ್ ಶಿಯರ್) ಇರುತ್ತದೆ. ಬಿರುಗಾಳಿಯ ಹಿಂಭಾಗದಲ್ಲಿಯ ಬೆಚ್ಚಗಿನ ತೇವಭರಿತ ಊಧ್ರ್ವಪ್ರವಾಹವನ್ನು ಕೆಳಕತ್ತರಿಸುವ ಮಳೆಯ ಆಂಶಿಕಬಾಷ್ಟೀಭವನದಿಂದ ಗುಪ್ತೋಷ್ಣವನ್ನು ಹೀರುವುದರ ಮೂಲಕ ಈ ಶಕ್ತಿ ಒದಗುತ್ತದೆ. ಊಧ್ರ್ವಪ್ರವಾಹ ಕ್ಷೋಭಸೀಮಾಕ್ಕಿಂತ (ಟ್ರೋಪೊ ಪಾಸ್) ಮುಂದೆ ಹಲವು ಕಿಲೊಮೀಟರ್ ಎತ್ತರಕ್ಕೆ ವ್ಯಾಪಿಸಿದ್ದು ಅಸಾಧಾರಣ ಎತ್ತರದ ಗುಮ್ಮಟಶಿರಗಳಿಗೆ ಕಾರಣವಾಗುತ್ತದೆ.

	ಕ್ಯುಮ್ಯುಲೊನಿಂಬಸ್ ಮೋಡದಿಂದ ತೊಡಗುವ ಪ್ರಾರಂಭಿಕ ಅಧೋಪ್ರವಾಹ ನೆಲ ತಲುಪಿದಾಗ ಕ್ಷಿತಿಜೀಯವಾಗಿ ಹರಡಿಹೋಗಿ ಅದರ ಮುಂಚೂಣಿ ಅಂಚಿನಲ್ಲಿ ಝಂಝಾ ಮಾರುತವಾಗಿ (ಸ್ಕ್ವಾಲ್) ಪ್ರಕಟವಾಗುತ್ತದೆ. ಇದರ ಸಾಧಾರಣ ವೇಗ 40 ನಾಟ್ ಆಗಿದ್ದರೂ ಗರಿಷ್ಟ ವೇಗ 100 ನಾಟ್‍ನಷ್ಟು  ಆಧಿಕವಾಗಿರಬಹುದು. ಝಂಝಾಮಾರುತಗಳು ಬೇಸಗೆಯ ಸಿಡಿಲು ಮಳೆ ಬಿರುಗಾಳಿ ಜೊತೆ ಕೂಡಿಕೊಂಡಾಗ ಇತರ ಋತುಗಳಿಗಿಂತ ಅಧಿಕ ತೀವ್ರವಾಗಿರುತ್ತವೆ,  ಸಿಡಿಲು ಮಳೆ ಬಿರುಗಾಳಿಯ ಚಲನದಿಶೆಯಲ್ಲಿ ಝಂಝಾಮಾರುತದ ಗರಿಷ್ಠ ವೇಗವಿದ್ದು ಎದುರು ದಿಶೆಯಲ್ಲಿ ಕನಿಷ್ಠವಾಗಿರುತ್ತದೆ.

	ಆಲಿಕಲ್ಲು : ಮೇಲೇರುತ್ತಿರುವ ವಾಯುಪ್ರವಾಹದಲ್ಲಿ ನೀರಹನಿಗಳು ರೂಪಗೊಂಡು ಮತ್ತು ಮೇಲಕ್ಕೆ ಒಯ್ಯಲ್ಪಟ್ಟು ಬರ್ಫಬಿಂದುವಿನ ಉಷ್ಣತೆಯಲ್ಲಿರುವ ಮಟ್ಟ ಐದಿದ ಕ್ಷಣದಲ್ಲೆ ಘನೀಭವಿಸುವುದಿಲ್ಲ. ಆರಂಭದಲ್ಲಿ ಬರ್ಫ ಬಿಂದುವಿಗಿಂತ ಕೆಳಗಿನ ಉಷ್ಣತೆಯಲ್ಲಿಯೂ ದ್ರವಜಲವಾಗಿಯೇ ಉಳಿದಿರುತ್ತದೆ. ಪ್ರಾಯಶಃ ಅವುಗಳ ಉಷ್ಣತೆ-10(ಅ ಗಿಂತ ಕೆಳಕ್ಕೆ ಇಳಿಯುವಾಗ ಅವು ಘನೀಭವಿಸುತ್ತದೆ. ಇಂಥ ಒಂದು ತಿರುಳು ಕೆಳಬೀಳುತ್ತಿದ್ದರೆ ಅದು ಮೊದಲು ಸಂಪರ್ಕಕ್ಕೆ ಬರುವುದು ಬರ್ಫಬಿಂದುವಿಗಿಂತ ಕೆಳಮಟ್ಟದಲ್ಲಿರುವ ನೀರಹನಿಗಳ ಜೊತೆ. ಈ ತಿರುಳಿನ ಮೇಲೆ ಹನಿಗಳು ಸುಲಭವಾಗಿ ಘನೀಭವಿಸುತ್ತವೆ. ಆ ವೇಳೆ ಇವು ಬರ್ಫದ ಒಳಗೆ ಒಂದಿಷ್ಟು ವಾಯುವನ್ನು ಬಂಧಿಸಿಡುತ್ತವೆ. ಹೀಗಾಗಿ ತಿರುಳಿನ ಸುತ್ತ ಬಿಳಿ ಬರ್ಫದ ಲೇಪ ಹೆಪ್ಪುಗಟ್ಟಿರುತ್ತದೆ. ಬಿಳಿಬರ್ಫ ಕವಚದಿಂದೊಡಗೂಡಿದ ಈ ತಿರುಳು ಮತ್ತೂ ಕೆಳಗೆ ಬಿದ್ದಂತೆ ಬರ್ಫಬಿಂದು ಉಷ್ಣತೆಯ ಮಟ್ಟ ತಲಪುತ್ತದೆ; ಇದರ ನೀರಾವಿ ನೀರಿನ ರೂಪದಲ್ಲಿ ಸಂಘನಿಸುತ್ತದೆ. ಇದು ಕೊಡಲೇ ಸ್ವಚ್ಛ ಬರ್ಫವಾಗಿ ಘನೀಭವಿಸುತ್ತದೆ. ಈ ಪ್ರಯಾಣದ ಫಲವಾಗಿ ಆಲಿಕಲ್ಲಿಗೆ ಮೃದುಬರ್ಫದ ಒಳತಿರುಳು ಇದರ ಮೇಲೆ ಬಿಳಿ ಬರ್ಫದ ಲೇಪನ ಮತ್ತು ಇದರ ಹೊರಗೆ ಸ್ವಚ್ಛ ಬರ್ಫದ ಕವಚ ಇರುತ್ತದೆ. ತೇವಪೂರಿತ ವಾಯುವನ್ನು ಮೊದಲು ಒಯ್ದ ತನ್ನ ಒಳ ಬಿಳಿಬರ್ಫಲೇಪನವನ್ನು ಈ ಮೊದಲು ಪಡೆದ ಎಡೆಗೆ ಅದನ್ನು ಮಗುದೊಮ್ಮೆ ಒಯ್ಯಬಹುದು. ಅಲ್ಲಿ ಇವಕ್ಕೆ ಬಳಿಬರ್ಫದ ಇನ್ನೊಂದು ಲೇಪನ ಒದಗುತ್ತದೆ. ಮೇಲೇರುತ್ತಿರುವ ಪ್ರವಾಹದಲ್ಲಿ ನಿಲುಗಡೆ ಕಂಡುಬಂದಾಗ ಆಲಿಕಲ್ಲು ಕೆಳಬೀಳತೊಡಗುತ್ತದೆ. ಆಗ ಅದು ಮತ್ತೆ ಸ್ವಚ್ಛಬರ್ಫದ ಇನ್ನೊಂದು ಲೇಪನ ಒದಗುತ್ತದೆ. ಮೇಲೇರುತ್ತಿರುವ ಪ್ರವಾಹದಲ್ಲಿ ನಿಲುಗಡೆ ಕಂಡುಬಂದಾಗ ಆಲಿಕಲ್ಲು ಗಾತ್ರದಲ್ಲೂ ತೂಕದಲ್ಲೂ ಬೆಳೆಯುತ್ತಿರುವುದು. ಅಂದ ಮಾತ್ರಕ್ಕೆ ಈ ಪ್ರಕ್ರಿಯೆ ಅನಿರ್ದಿಷ್ಟ ಕಾಲ ಮುಂದುವರಿಯಲಾರದು. ಏಕೆಂದರೆ ಆಲಿಕಲ್ಲಿನ ಗಾತ್ರ ಒಂದು ಮಿತಿ ದಾಟಿದ ಬಳಿಕ ಅದರ ಭಾರವನ್ನು ಊಧ್ರ್ವಪ್ರವಾಹ ಭರಿಸಲಾರದು, ಆಳಿಕಲ್ಲನ್ನು ಕತ್ತರಿಸಿ ಅದರ ಅಡ್ಡಕೊಯ್ತವನ್ನು ಪರೀಕ್ಷಿಸಿದಾಗ ಅದು ಯಾವ ವಲಯದಲ್ಲಿ ಎಂಥ ಮಾರುತಗಳಿಂದ ಹೇಗೆ ರೂಪುಗೊಂಡಿತು ಎಂಬ ವಿವರಗಳನ್ನು ಅರಿಯುವುದು ಸಾಧ್ಯ. ವಾಯುವಂಡಲದಲ್ಲಿ ತೀವ್ರವಾದ ಊಧ್ರ್ವಗಾಮಿ ಪ್ರವಾಹಗಳಿರುವಾಗ ಮಾತ್ರ ದೊಡ್ಡ ಆಲಿಕಲ್ಲುಗಳು ಮೈದಳೆಯುತ್ತದೆ. ಹೆಚ್ಚಿನ ಆಲಿಕಲ್ಲುಗಳು ಸುಮಾರು 0.6 ಸೆಂಮೀ ಅಡ್ಡ ಗಾತ್ರದವು. ಏಕೆಂದರೆ ಇಂಥ ಸಂದರ್ಭದಲ್ಲಿ ಮಾತ್ರ ಅವು ಅತಿ ಕ್ಷಿಪ್ರವಾಗಿ ಕೆಳಗೆ ಬಿದ್ದು ಹೋಗುವುದಿಲ್ಲ. ಅಲ್ಲದೆ ಮೊಡ ಬಲು ಎತ್ತರಕ್ಕೆ, ಕನಿಷ್ಠ ಪಕ್ಷೆ-20(ಅ ಉಷ್ಣತೆ ಆಗುವಲ್ಲಿಯವರೆಗಾದರೂ ವ್ಯಾಪಿಸಿರಬೇಕು ಮತ್ತು ಅದರ ತಳ ಬರ್ಫ ಬಿಂದು ಉಷ್ಣತೆಯ ಮಟ್ಟಕ್ಕಿಂತಲೂ ಕೆಳಗಿರಬೇಕು.
(ಡಿ.ಕೆಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ